ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗಾಂಜಾ ಮಾಫಿಯಾ ಜೋರಾಗಿದೆ. ಅನೇಕ ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ಬದಲಾಗುತ್ತಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ.
ರೇಡ್ ಮಾಡಿರುವ ಪೊಲೀಸರು 18 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.ಆರೋಪಿಗಳಾದ ಅಶೋಕ್ ಪ್ರದಾನ್ ಮತ್ತು ಮನೋಜ್ ಪ್ರದಾನ್ ಬಂಧನವಾಗಿದೆ.
ಇಬ್ಬರು ಒಡಿಶಾ ಮೂಲದವರು ಎಂದು ಗೊತ್ತಾಗಿದೆ.
ಟ್ರೈನ್ ನಲ್ಲಿ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಮಹದೇವಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


