Google search engine
Homeಸುದ್ದಿಗಾರ ವಿಶೇಷಮಾರ್ಷಲ್ಸ್ ಗಳ ಹೆಸರಲ್ಲಿ ಮಾರ್ವೆಲ್ಸ್ ಭ್ರಷ್ಟಾಚಾರ.?

ಮಾರ್ಷಲ್ಸ್ ಗಳ ಹೆಸರಲ್ಲಿ ಮಾರ್ವೆಲ್ಸ್ ಭ್ರಷ್ಟಾಚಾರ.?

ಬಿಬಿಎಂಪಿಯಲ್ಲಿ ಮತ್ತೊಂದು ಬಹು ಕೋಟಿ ಹಗರಣ ಬಯಲು

ಬಿಬಿಎಂಪಿಯಲ್ಲಿ ಮತ್ತೊಂದು ಬಹು ಕೋಟಿ ಹಗರಣ ಬಯಲಾಗಿದ್ದು, ಮಾರ್ಷಲ್ಸ್ ಗಳ ಹೆಸರಲ್ಲಿ ಮಾರ್ವೆಲ್ಸ್ ಭ್ರಷ್ಟಾಚಾರ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಮಾರ್ಷಲ್ ಗಳ ನೇಮಕಾತಿಯಲ್ಲಿ ಭಾರೀ ಹಗರಣ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ನಕಲಿ ದಾಖಲೆ ಸೃಷ್ಟಿಸಿ ಪ್ರತಿ ತಿಂಗಳು ಸಂಬಳ ಡ್ರಾ

ಈ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ದಾಖಲೆ ಸಮೇತ ಇಡಿ ಹಾಗೂ ಲೋಕಯುಕ್ತಕ್ಕೆ ದೂರು ನೀಡಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಹಾಗೂ ಕೆರೆ ರಕ್ಷಣೆಗಾಗಿ 770 ಮಾರ್ಷಲ್ ಗಳ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ನೇಮಕಾತಿಯಲ್ಲಿ ಅರ್ಧದಷ್ಟು ಜನರನ್ನು ನೇಮಕಾತಿ ಮಾಡಿಲ್ಲ, ನಕಲಿ ದಾಖಲೆ ಸೃಷ್ಟಿಸಿ ಪ್ರತಿ ತಿಂಗಳು ಸಂಬಳ ಡ್ರಾ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಇದೀಗ ಮತ್ತೆ 300 ಮಾರ್ಷಲ್‌ಗಳ ನೇಮಕಾತಿಗೆ ಟೆಂಡರ್ ಅಹ್ವಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular