ಮೈಸೂರಿನ ಉದಯಗಿರಿ ಗಲಭೆ ಕೇಸ್ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಕಾರಣವನ್ನು ಸೀರಿಯಸ್ ಆಗಿ ತೆಗೆದುಕೊಳ್ತೇವೆ.ಯಾರದ್ದೂ ಮೂಲಾಜಿಲ್ಲದೇ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು , ಪೊಲೀಸ್ ಠಾಣೆಗೆ ಕಲ್ಲು ಹೊಡಿತಾರೆ ಕಾರ್ ಬೈಕ್ ಜಖಂ ಮಾಡ್ತಾರೆ ಎಂದರೆ ಸುಮ್ಮನಿರಲು ಸಾಧ್ಯವಿಲ್ಲ.ಕಠಿಣ ಕ್ರಮ ತೆಗೆದುಕೋಳ್ತೇವೆ.ಯಾರು ಅನ್ನೋದನ್ನ ಕ್ಯಾಮರಾದಲ್ಲಿ ಐಡೆಂಟಿಪೈ ಮಾಡಿದ್ದಾರೆ. ಅವರೆಲ್ಲರನ್ನ ಅರೆಸ್ಟ್ ಮಾಡೋಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಬಹಳ ಕಠಿಣವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೇನೆ. ಕೇಸ್ ನಲ್ಲಿ ಪೊಲೀಸರ ವೈಫಲ್ಯ ಇಲ್ಲ. ನಮಗೆ ಆರೋಪಿಯನ್ನು ಹ್ಯಾಂಡೋವರ್ ಮಾಡಿ ಎಂದರೆ ಕಾನೂನು ಅವರ ಕೈಗೆ ಕೊಡೊಕಾಗುತ್ತಾ?ನಮ್ಮ ಕೈಲಿ ಕೊಡಿ ಎಂದರೆ ಏನು ಮಾಡೋದು.ಅವರದ್ದೇನಿದ್ದರರೂ ಪೊಲೀಸರಿಗೆ ಹೇಳಬೇಕಿತ್ತು ಎಂದು ಪರಂ ತಿಳಿಸಿದರು..
ಬಿಜೆಪಿ ಸರ್ಕಾರ ಇದ್ದಾಗ ಈ ರೀತಿಯ ಘಟನೆ ಆಗಿರಲಿಲ್ವಾ? ಅವರ ಸರ್ಕಾರ ಇದ್ದಾಗ ಎಷ್ಟು ಕೇಸ್ ಆಗಿದೆ ಎಂದು ಹೇಳಿ ನೋಡೋಣ ಎಂದು ಪರಮೇಶ್ವರ್ ಟಾಂಗ್ ನೀಡಿದರು.ಇನ್ನು, ಎಫ್‌ಐಆರ್‌ನಲ್ಲಿ ಸಂಗಮೇಶ್ ಪುತ್ರನ ಹೆಸರನ್ನ ಕೈ ಬಿಟ್ಟಿರೋ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಟ್ಟರು.ಪೊಲೀಸರು ಫೈಂಡ್ ಔಟ್ ಮಾಡ್ತಾರೆ. ಶಾಸಕ ಸಂಗಮೇಶ ಪುತ್ರ ಘಟನೆಯಲ್ಲಿ ಇದ್ದಾರೆ ಎಂದರೆ ಎಫ್‌ಐಆರ್ ನಲ್ಲಿ ಸೇರಿಸಿಕೊಳ್ತಾರೆ.ತನಿಖೆ ಮಾಡ್ತಾರೆ. ಅವರಿದ್ದಾರೆ ಅನ್ನೋದು ಗೊತ್ತಾದ್ರೆ ಸೇರಿಸಿಕೊಳ್ತಾರೆ. ಡಿವೈಎಸ್‌ಪಿಗೆ ಸೂಚನೆ ಕೊಟ್ಟಿದ್ದೇವೆ.ತುರ್ತಾಗಿ ವರದಿ ಕೊಡಲು ಹೇಳಿದ್ದೇವೆ ಎಂದು ಹೇಳಿದರು.


