Google search engine
Homeಕರ್ನಾಟಕ ಸುದ್ದಿಕೆಎನ್ ರಾಜಣ್ಣ v/s ಡಿಕೆಶಿ : ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ನಾಯಕರ ನಡುವಿನ ವೈಮನಸ್ಸಿಗೆ ಕಾರಣ...

ಕೆಎನ್ ರಾಜಣ್ಣ v/s ಡಿಕೆಶಿ : ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ನಾಯಕರ ನಡುವಿನ ವೈಮನಸ್ಸಿಗೆ ಕಾರಣ ಏನು?

ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಚಿವ ಕೆ ಎನ್ ರಾಜಣ್ಣ ನಡುವಿನ ಭಿನ್ನಮತ ಮತ್ತೊಮ್ಮೆ ಬಹಿರಂಗಗೊಂಡಿದೆ. ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಇದೀಗ ಮತ್ತೊಮ್ಮೆ ಅದು ಸಾರ್ವಜನಿಕಗೊಂಡಿದೆ. ಉದಯಗಿರಿ ಗಲಭೆ ಘಟನೆಯ ಕುರಿತಾದ ಹೇಳಿಕೆಗಳು ಉಭಯ ನಾಯಕರ ನಡುವಿನ ವೈಮನಸ್ಸನ್ನು ಬಹಿರಂಗಪಡಿಸಿದೆ.ಡಿಕೆ ಶಿವಕುಮಾರ್ ಹಾಗೂ ಕೆ ಎನ್ ರಾಜಣ್ಣ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಈ ಹಿಂದೆಯೂ ಇದು ಕಾಣಿಸಿಕೊಂಡಿತ್ತು. ಹೆಚ್ಚುವರಿ ಡಿಸಿಎಂ ಚರ್ಚೆಯನ್ನು ಹುಟ್ಟು ಹಾಕಿದ್ದೇ ಕೆ ಎನ್ ರಾಜಣ್ಣ. ಸಿಎಂ ಸಿದ್ದರಾಮಯ್ಯ ಬಣದ ಜೊತೆಗೆ ಗುರುತಿಸಿಕೊಂಡಿದ್ದ ರಾಜಣ್ಣ ಒಬ್ಬರೇ ಡಿಸಿಎಂ ಏಕೆ, ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹೆಚ್ಚುವರಿ ಡಿಸಿಎಂ ಅಗತ್ಯ ಇದೆ ಎಂದಿದ್ದರು. ಇದು ಡಿಕೆಶಿಯ ಅಸಮಾಧಾನಕ್ಕೂ ಕಾರಣವಾಗಿತ್ತು.ಡಿಕೆಶಿಯ ಅಸಮಾಧಾನಕ್ಕೆ ಉತ್ತರ ನೀಡುವ ಭರದಲ್ಲಿ ಮಾತನಾಡಿದ್ದ ಕೆ ಎನ್ ರಾಜಣ್ಣ “ಡಿಸಿಎಂ ಡಿ.ಕೆ ಶಿವಕುಮಾರ್ ಬೇಜಾರಾಗಲು ಅವರ ಆಸ್ತಿ ಏನಾದರೂ ಬರೆಸಿಕೊಂಡಿದ್ದೇವಾ? ಇದೆಲ್ಲ ಸುಮ್ಮನೆ ಅಷ್ಟೇ” ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular