ನಮ್ಮ ಮೆಟ್ರೋ ಟಿಕೆಟ್ ಬೆಲೆ ಭಾರೀ ಮಟ್ಟದಲ್ಲಿ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಸರ್ಕಾರ ಬಿಗ್ ಶಾಕ್ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಸಾರ್ವಜನಿಕರು ಮೆಟ್ರೋ ಪ್ರಯಾಣವೇ ಬೇಡವೆಂದು ಬಿಎಂಟಿಸಿ, ಖಾಸಗಿ ವಾಹನಗಳ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡು ಇದೀಗ ಕೆಲವೆಡೆ ಮಾತ್ರ ಹೊಸ ದರ ಜಾರಿ ಮಾಡಿದ್ರೆ, ಇನ್ನು ಕೆಲವೆಡೆ ಅದೇ ಟಿಕೆಟ್ ಬೆಲೆ ಇದೆ.
ಟಿಕೆಟ್ ದರ ಬದಲಾವಣೆ ಆಗದ ಮೆಟ್ರೋ ಸ್ಟೇಷನ್ಗಳ ವಿವರ ಇಲ್ಲಿದೆ
- ಮೆಜೆಸ್ಟಿಕ್ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣ- 60 ರೂಪಾಯಿ
- ಮೆಜೆಸ್ಟಿಕ್ನಿಂದ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣ- 60 ರೂಪಾಯಿ
- ಮೆಜೆಸ್ಟಿಕ್ ಟು ಕೆಂಗೇರಿ ಮೆಟ್ರೋ ನಿಲ್ದಾಣ- 60 ರೂ.
- ಮೆಜೆಸ್ಟಿಕ್ ಟು ಸೀತಾರಾಮನಪಾಳ್ಯ- 60 ರೂ.
- ಮೆಜೆಸ್ಟಿಕ್ನಿಂದ ಕೋಣನಕುಂಟೆ ಕ್ರಾಸ್- 60 ರೂ.
- ಮೆಜೆಸ್ಟಿಕ್ನಿಂದ ರಾಜರಾಜೇಶ್ವರಿ ನಗರ- 50 ರೂ.


